Activity 9

ಶಿಕ್ಷಕರು ಎಂದರೆ ಒಂದರ್ಥದಲ್ಲಿ ವಿದ್ಯಾರ್ಥಿಗಳೇ ಏಕೆಂದರೆ ಅವರು ನಿರಂತರವಾಗಿ ಏನಾದರೂ ಹೊಸತನ್ನು ಕಲಿಯುತ್ತಾರೆ. ಅಂದಾಗಲೆ ವಿದ್ಯಾರ್ಥಿಗಳಿಗೆ ಹೊಸ ಹೊಸ ಜ್ಞಾನ ಲಭಿಸುತ್ತದೆ. ಅದಕ್ಕಾಗಿ ಶಿಕ್ಷಕರು ಕೂಡ ಅವಕಾಶ ಸಿಕ್ಕಾಗ ತಮ್ಮ ಜ್ಞಾನಾರ್ಜನೆಗಾಗಿ ಮೊದಲು ಒತ್ತು ಕೊಡುತ್ತಾರೆ. ಶಿಕ್ಷಕರು ಹೆಚ್ಚು ಜ್ಞಾನ ಸಂಪಾದಿಸಾದಾಗ ವಿದ್ಯಾರ್ಥಿಗಳಿಗೆ ಹೆಚ್ಚು ರೀತಿಯಲ್ಲಿ ಊಣಬಡಿಸಲು ಸಾಧ್ಯ.
         ಮಾನ್ಯ ಆಯುಕ್ತರ ಆದೇಶ ಮನೆಯಿಂದ ಕೆಲಸ ನಿರ್ವಹಿಸುವ ಈ ಸಮಯವೂ ಕೂಡ ಹಲವಾರು ಸಮಸ್ಯೆಗಳ ಸವಾಲುಗಳ ಮದ್ಯೆ ಅವರ ಜ್ಞಾನಾರ್ಜನೆಗೂ ಅವಕಾಶ ಸಿಕ್ಕಿತು. 
    ನಾವೆಲ್ಲರೂ ವೈದ್ಯ ಪದವಿಯನ್ನು ಪಡೆಯದೆ sanitizer. Mask.glouse.yuminity.vitamin.ಹೀಗೆ ಹಲವು ಪದಗಳ ವಿವರಣೆ ಬಳಕೆ ಮತ್ತು ಪ್ರಾಮುಖ್ಯತೆ ತಿಳಿದುಕೊಂಡಿದ್ದೆವೆ.ಇವೆಲ್ಲವೂ ಕೇಳಿದ್ದೇವೆ ಹೊರತು ವಿವರವಾಗಿ ಗೊತ್ತಿರಲಿಲ್ಲ. ಬಳಸುವುದನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡುತ್ತಿದ್ದೆವೆ. 
ಮತ್ತೆ ಮನೆಯಿಂದ ಕೆಲಸದಲ್ಲಿ ತಂತ್ರಜ್ಞಾನ ಬಳಕೆ ಗರಿಷ್ಠವಿದೆ ಅವುಗಳ ಜ್ಞಾನ ವ್ರದ್ಧಿಸಿಕೊಳ್ಳಲು ಸಹಾಯವಾಯಿತು.ಈ ಮೊದಲು TALP ತರಬೇತಿ ಪಡೆದು ಅದನ್ನ ತರಗತಿಯಲ್ಲಿ ಅಳವಡಿಸಿಕೊಂಡಿದ್ದರಿಂದ ಸಹಾಯವಾಯಿತು. ಮೊದ ಮೊದಲು ಕಠಿಣವೆನಿಸಿದರೂ ಅವುಗಳ ಬಳಕೆಯಲ್ಲಿ ನುರಿತೆವೆಂದರೆ ತಂತ್ರಜ್ಞಾನವೇ ಮುಖ್ಯ ಎನಿಸುತ್ತದೆ. 
ವಿವಿಧ ರೀತಿಯ  account ತೆಗೆಯುವುದು ನಮ್ಮ ಬರಹಗಳನ್ನು post ಮಾಡುವುದು share ಮಾಡುವುದು ನಮ್ಮದೇ channel ತೆಗೆಯುವುದು ಹಲವಾರು ಜನರೊಂದಿಗೆ ಒಂದೆ ಸಮಯದಲ್ಲಿ meet ಆಗಿ ಜ್ಞಾನ ವಿನಿಮಯ ಮಾಡಿಕೊಳ್ಳುವುದು ನಿಜವಾಗಿಯೂ ತಂತ್ರಜ್ಞಾನ ನಮ್ಮೆಲ್ಲರಿಗೂ ಹತ್ತಿರ ತರುವುದುರ ಜೊತೆಗೆ ಜ್ಞಾನದ ಹೊಸ ಆಯಾಮ ತಿಳಿಸಿಕೂಟ್ಟಿದೆ. 
     ಇವೆಲ್ಲವುಗಳ ಮಧ್ಯೆ ತಂತ್ರಜ್ಞಾನ ಎಷ್ಟು ಮುಂದುವರೆದರೂ ಓದುವುದು ಬರೆಯುವುದನ್ನು ಮಾತ್ರ ನಾವು ಮಾಡಲೇಬೇಕು. ಅದಕ್ಕಾಗಿ ತಂತ್ರಜ್ಞಾನಕ್ಕೆ  computer ಅಲ್ಲಿ ಅಳವಡಿಸುವ ಮುನ್ನ ಅದರ ಕಚ್ಚಾ ಪ್ರತಿಯನ್ನು ಬರೆಯುತ್ತಿದ್ದೆ. ಭಾಷಾ ಶಿಕ್ಷಕರಿಗೆ ಇದು ಬಹಳ ಮುಖ್ಯ. YouTube. Wikipedia'.Google ಮುಂತಾದ web  ಗಳಲ್ಲಿ ನಮ್ಮ ಅಭಿಲಾಷೆ ಆಯ್ಕೆಗಳನ್ನು ಹುಡುಕಿದರೆ ಕ್ಷಣಾರ್ಧದಲ್ಲಿ ನಮ್ಮ ಜ್ಞಾನದ ಕಣಜ ತುಂಬುತ್ತಿತ್ತು ಜೊತೆಗೆ ಜ್ಞಾನದ  ಹರಿವು ಬೆಳೆಯುತ್ತಿತ್ತು. 
ಇವೆಲ್ಲವುಗಳ ಮಧ್ಯೆ ಒಂದಷ್ಟು ಮನೋರಂಜನ ಧಾರಾವಾಹಿಗಳು ಸಿನೆಮಾ ನೋಡಿದೆ. ಪ್ರಪಂಚದ ಅರಿವು ಮುಖ್ಯ. ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರ ಚೋಮನ ದುಡಿ ಕಾದಂಬರಿ ಹಾಗೂ ಗೀತಾ ನಾಗಭೂಷಣರ ಹಸಿ ಮೌಂಸ ಮತ್ತು ಹದ್ದುಗಳು ಎರಡೂ ಕಾದಂಬರಿ ಓದಿದೆ. ಅವರ ಬರವಣಿಗೆಯ ಚಾತುರ್ಯಕ್ಕೆ ಮನಸೋತೆ ಹಾಗೂ ಅಲ್ಲಿನ ಸಾಮಾಜಿಕ ಪರಿಸ್ಥಿತಿಯು ಮನುಷ್ಯತ್ವ ಪ್ರಶ್ನೆ ಮಾಡುವಂತಿತ್ತು. 
  ಒಟ್ಟಾರೆಯಾಗಿ ಈ ಬಿಡುವಿನ work from home ಮನೆಯ ಕೆಲಸಗಳ ಮದ್ಯೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಸ್ವಲ್ಪ ಹೆಚ್ಚು ಬಳಸಿಕೊಂಡಂತಾಯಿತು.
            ಧನ್ಯವಾದಗಳು 

Comments

Popular posts from this blog